ಸಿರಿಯನ್ ಸಲಿಕೆಪಾದ ಕಪ್ಪೆಯು ಪೂರ್ವ ಯೂರೋಪ್ ಮತ್ತು ಪಶ್ಚಿಮ ಏಷ್ಯಾ ಖಂಡದಲ್ಲಿ ಕಾಣಸಿಗುವ ಒಂದು ಕಪ್ಪೆಯ ಬಗೆ. ಪೆಲೋಬಟೇಸ್ ಸಿರಿಯಾಕಸ್ ಎಂಬುದು ಈ ಕಪ್ಪೆಯ ವೈ~ಜ್ಞಾನಿಕೆ ಹೆಸರು. ಈ ಕಪ್ಪೆ, ಪೆಲೋಬಟಿಡೇ ಸಂಕುಲಕ್ಕೆ ಸೇರಿದ್ದು. == ಗುರುತು ಗಳು == ಸಿರಿಯನ್ ಸಲಿಕೆಪಾದ ಕಪ್ಪೆಯು ದೊಡ್ಡ ತಲೆ ಇರುವ ದಪ್ಪ ದೇಹದ ಕಪ್ಪೆ. 9 ಸೆಂಟಿಮೀಟರ್ ನಷ್ಟು ಉದ್ದ ಬೆಳೆಯಬಲ್ಲ ಈ ಕಪ್ಪೆ, ಮೃದುವಾದ ಚರ್ಮ ಹೊಂದಿರುತ್ತದೆ. ಗಂಡು ಕಪ್ಪೆಯ ಮುಂಪಾದದ ಹಿಂಬದಿಯಲ್ಲಿ ದೊಡ್ಡದಾದ ಗ್ರಂಥಿಯನ್ನು ಕಾಣಬಹುದು. ಸಂತಾನೋತ್ಪತ್ತಿ ಕಾಲದಲ್ಲಿ, ಈ ಗ್ರಂಥಿಯು ದೊಡ್ಡದಾಗುತ್ತದೆ. == ಪಾದ == ಮುಂಪಾದದಲ್ಲಿ ನಾಲ್ಕು ಬೆರಳುಗಳು ಮತ್ತು ಹಿಂಪಾದದಲ್ಲಿ ಐದು ಬೆರಳುಗಳನ್ನು ಕಾಣಬಹುದು. == ಬಣ್ಣ == ಈ ಕಪ್ಪೆಗಳು ಬಹು ಬಣ್ಣ ಗಳಲ್ಲಿ ಕಾಣಸಿಗುತ್ತವೆ. ಮಾಸಿದ ಕಂದು ಬಣ್ಣದ ಬೆನ್ನು, ದೊಡ್ಡ ಪ್ರಮಾಣದ ಹಸಿರು ಮಚ್ಚೆಗಳು ಮತ್ತು ಹೊಟ್ಟೆ ಭಾಗದಲ್ಲಿ ಕಂದು ಬಣ್ಣದ ಮಚ್ಚೆಯನ್ನು ಕಾಣಬಹುದು. ಪಶ್ಚಿಮ ಏಷ್ಯಾ ಖಂಡದ ಸಲಿಕೆಪಾದ ಕಪ್ಪೆಗಳ ಪಾದಗಳು ಕಪ್ಪು ಬಣ್ಣದ ವಾಗಿರುತ್ತವೆ. ಪೂರ್ವ ಯೂರೋಪ್ ಸಲಿಕೆಪಾದ ಕಪ್ಪೆಗಳ ಪಾದಗಳು, ಕಂದುಬಣ್ಣದ ಪಾದ ಹೊಂದಿರುತ್ತದೆ. == ಸಂತಾನ == ಈ ಕಪ್ಪೆಯ ಗೊದಮೊಟ್ಟೆಗಳು ಬಲು ದೊಡ್ಡದಾದ ಕಾರಣ, ಸಾಕಷ್ಟು ದೊಡ್ದ ಕೊಳಗಳು ಮತ್ತು ಮೀನುಗಳು ಹೆಚ್ಚು ಇಲ್ಲದ ಕೊಳಗಳಲ್ಲಿ, ಈ ಮೀನುಗಳು ವಾಸ ಮಾಡುತ್ತವೆ. == ವಾಸಸ್ಥಾನ == ಪಶ್ಚಿಮ ಏಷ್ಯಾ ಖಂಡದ ಸಲಿಕೆಪಾದ ಕಪ್ಪೆಗಳು, ಆರ್ಮೇನಿಯಾ, ಅಜರ್ಬೈಜಾನ್, ಬಲ್ಗೇರಿಯ, ಜಾರ್ಜಿಯ, ಗ್ರೀಸ್, ಇರಾನ್, ಇಸ್ರೇಲ್, ಲೆಬನಾನ್, ಮಸೆಡೋನಿಯ, ರೊಮಾನಿಯ, ರಷ್ಯಾ, ಸೆರ್ಬಿಯ, ಸಿರಿಯ ಮತ್ತು ಟರ್ಕಿ ಈ ದೇಶಗಳಲ್ಲಿ ಕಾಣಬಹುದು. ಭಾಗಶಃ ಮರುಭೂಮಿ, ದಿಬ್ಬಗಳು ಮತ್ತು ಪೊದೆ ಇರುವ ಜಾಗಗಳು ಈ ಕಪ್ಪೆಯ ವಾಸಸ್ಥಾನ. ತಮ್ಮ ಸಲಿಕೆಪಾದಗಳ ಮೂಲಕ ಮಣ್ಣನ್ನು ಅಗೆದು ಬಿಲ ನಿರ್ಮಾಣ ಮಾಡಲು, ಈ ಸ್ಥಳಗಳಲ್ಲಿ ಅನುಕೂಲ ವಾಗುತ್ತದೆ. == ಧ್ವನಿ == ಸಿರಿಯನ್ ಸಲಿಕೆಪಾದ ಕಪ್ಪೆಯು ನಿಶಾಚರವಾದುದು, ಅಂದರೆ ರಾತ್ರಿ ಹೊತ್ತಿನಲ್ಲಿ ಹೆಚ್ಚು ಓಡಾಟವನ್ನು ತೋರುವುದು. ಈ ಕಪ್ಪೆಯು ಪತರುಗುಟ್ಟುವುದು ನೀರಿನ ಅಡಿಯಿಂದ. ರಾತ್ರಿಯಿಡೀ ಕ್ಲಾಕ್ ಕ್ಲಾಕ್ ಎಂಬ ಧ್ವನಿ ಹೊರಡಿಸುತ್ತವೆ. ಈ ಧ್ವನಿ ಸುಮಾರು ದೂರದಿಂದಲೂ ಕೇಳಸಿಗುತ್ತದೆ. == ಹವಾಮಾನ == ಹೆಚ್ವು ಮಳೆಯಾಗಿ ತೇವಾಂಶ ಹೆಚ್ಚು ಇರುವ ಜಾಗಗಳಲ್ಲಿ ಈ ಕಪ್ಪೆಗಳು ವಾಸ ಮಾಡುವುದಿಲ್ಲ.ಬಿಸಿಲು ಹೆಚ್ಚು ಇರುವ ಪ್ರದೇಶದಲ್ಲಿ ಇವು ಹೆಚ್ಚು ಕಾಣ ಸಿಗುತ್ತವೆ. ತಾಪಮಾನ ಹೆಚ್ಚು ಆದಾಗ, ಈ ಕಪ್ಪೆಗಳು ಬಿಲದ ಅಡಿಯಲ್ಲಿ ನುಸುಳಿ ವಾಸಿಸುತ್ತವೆ. ನದಿ ಪಾತ್ರ ಗಳಲ್ಲಿ, ಹೆಚ್ಚು ಬದುಕುವ ಈ ಕಪ್ಪೆಗಳು, ಬರಗಾಲದ ಸಮಯದಲ್ಲಿ ಸಾಯುವ ಪ್ರಮಾಣ ಹೆಚ್ಚು. ಚಳಿಗಾಲದಲ್ಲಿ ಮರದ ಬೇರುಗಳು ಅಥವಾ ಕಲ್ಲುಬಂಡೆಗಳ ಅಡಿಯಲ್ಲಿ ಈ ಕಪ್ಪೆಯ ಮರಿಗಳು ಕಾಣಸಿಗುತ್ತವೆ. ಫ಼ೆಬ್ರವರಿಯಿಂದ ಮೇ ತಿಂಗಳಿನ ಅವಧಿಯಲ್ಲಿ ಸಂತಾನೋತ್ಪತ್ತಿಗೆ ಪ್ರಶಸ್ತ ಕಾಲ.2 ಸೆಂಟಿಮೀಟರ್ ನಿಂಸ 1 ಮೀಟರ್ ವರೆಗೆ ಉದ್ದವಿರುವ ಅಂಟು ಪದಾರ್ಥದ ಮೇಲೆ ಹಲವು ಸಾವಿರ ಮೊಟ್ಟೆಗಳನ್ನು ಈ ಕಪ್ಪೆ ಇಡುತ್ತದೆ. 3 ದಿನಗಳ ನಂತರ ಮೊಟ್ಟೆ ಒಡೆದು ಹೊರಬರುವ ಮರಿಗಳು, ಪಾಚಿ, ನೀರುಹುಳು ಇವೇ ಮುಂತಾದ ಪ್ರಾಣಿಗಳನ್ನು ತಿಂದು, 3 ತಿಂಗಳಲ್ಲಿ ರೂಪಾಂತರ ಹೊಂದಿ, ದೊಡ್ಡದಾಗುತ್ತವೆ. == ಅಳಿವು-ಉಳಿವು == ಈ ಕಪ್ಪೆಯು ಅಳಿವಿನ ಅಂಚಿನಲ್ಲ್ಲಿ ಇಲ್ಲ. ಈ ಕಪ್ಪೆಯು ಬಲು ಕಡಿಮೆ ಜಾಗದಲ್ಲಿ (ಪಶ್ಚಿಮ ಏಷ್ಯಾ ಮತ್ತು ಪೂರ್ವ ಯೂರೋಪ್) ಕಂಡುಬಂದರೂ ಸಹಿತ, ಆ ಪ್ರದೇಶದಲ್ಲಿ ಹೇರಳವಾಗಿ ಕಾಣಸಿಗುತ್ತವೆ. ಜೌಗು ನೆಲ ಮತ್ತು ನದಿ ಪಾತ್ರ ಗಳ ಸಂಖ್ಯೆ ಕಡಿಮೆಯಾಗುತ್ತ, ಈ ಕಪ್ಪೆಗಳು ಕಡಿಮೆಯಾಗ ತೊಡಗಿವೆ. ಮರುಭೂಮಿಯಲ್ಲಿ ಕೂಡ, ಜನಸಾಂದ್ರತೆ ಹೆಚ್ಚು ಆಗಿ, ಈ ಕಪ್ಪೆಗಳ ಸಂಖ್ಯೆಯು ಕಡಿಮೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. == ಉಲ್ಲೇಖ ==